ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಹೋರಾಟ: ಬಿ. ವೈ .ವಿಜಯೇಂದ್ರ

2 min read · Updated 10 views
WhatsApp
ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಹೋರಾಟ: ಬಿ. ವೈ .ವಿಜಯೇಂದ್ರ

ಶಿವಮೊಗ್ಗ: ಸರಕಾರದ ಏಕಪಕ್ಷೀಯ ತೀರ್ಮಾನ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತಾಗಿದೆ. ರೈತರ ಪರವಾಗಿ ಇರಬೇಕಾದ ಮುಖ್ಯಮಂತ್ರಿಗಳು ತಮಿಳುನಾಡಿನ ಪರವಿದ್ದಂತೆ ಕಾಣುತ್ತಿದೆ. ಈ ಉದ್ದೇಶದಿಂದ ಜು. 31 ರಂದು ಮಂಡ್ಯದಲ್ಲಿ ಹೋರಾಟ ರೂಪಿಸಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಾಡಿನ ಜನತೆಗೆ ಗುರುಪೂರ್ಣಿಮೆಯ ಶುಭಾಶಯ ಕೋರುತ್ತಾ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹೋರಾಟದ ಸ್ವರೂಪವನ್ನು ನಾಯಕರು ಕುಳಿತು ತೀರ್ಮಾನಿಸಲಿದ್ದೇವೆ; ಕಾವೇರಿ ಕೊಳ್ಳದ ಭಾಗದ ರೈತರ ಪರವಾಗಿ ನಾವು ಹೋರಾಟ ಮಾಡುತಿದ್ದೇವೆ. ಕಾವೇರಿ ಕೊಳ್ಳದ ರೈತರ ಪರವಾಗಿ ನಾವು ಇದ್ದೇವೆ ಎಂದು ರೈತರಿಗೆ ತಿಳಿಸಿದ್ದಾರೆ.

ಸರಕಾರದ ಏಕಪಕ್ಷೀಯ ತೀರ್ಮಾನ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತಾಗಿದೆ. ಕಾವೇರಿ ಕೊಳ್ಳದ ರೈತರು ಬಿತ್ತನೆ ಮಾಡಬೇಡಿ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ಹೇಳಿದ್ದರು. ಆತ್ಮಸ್ಥೈರ್ಯ ತುಂಬಬೇಕಾದ ಸಿಎಂ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ನೀರು ಬಿಡಬೇಕೆಂಬ ಈ ತೀರ್ಮಾನ ಬರುವ ಮುನ್ನವೇ ಹೇಳಿಕೆ ನೀಡಿ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಮಾಡಿದ್ದಾರೆ ಎಂದ ಅವರು, ಮುಖ್ಯಮಂತ್ರಿಗಳೇ ಯಾಕೆ ಇಂತಹ ಕಪಟ ನಾಟಕ ಮಾಡುತ್ತಿದ್ದಿರಾ ? ಎಂದು ಪ್ರಶ್ನಿಸಿದ್ದಾರೆ.

17.39 ಟಿಎಂಸಿ ನೀರು ಇದ್ದು 5 ಟಿಎಂಸಿ ಡೆಡ್ ಸ್ಟೋರೇಜ್ ನೀರು ಇರಲೇಬೇಕು. ಇರುವ 13 ಟಿಎಂಸಿ ನೀರು ಬಿಟ್ಟರೆ ನಮ್ಮ ರೈತರ ಪರಿಸ್ಥಿತಿ ಏನಾಗಬೇಕು? ಸಿಡಬ್ಲೂಆರ್ ಸಿಗೆ ಮತ್ತೆ ಅರ್ಜಿ ಹಾಕಿ ಸರಿಯಾಗಿ ವಾದ ಮಾಡಬೇಕು. ಸಂಪುಟ ವಿಸ್ತರಣೆಗಾಗಿ ಪದೇ, ಪದೇ ದೆಹಲಿಗೆ ಹೋಗುವ ಸಿಎಂ ಶಿವಕುಮಾರ್ ವಕೀಲರನ್ನು ಕರೆಸಿ ಏಕೆ ಮಾತನಾಡಿಲ್ಲ ಎಂದ ಅವರು, ಶಿವಕುಮಾರ್ ಅವರೇ ರೈತರಿಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ ಎಂದು ಟೀಕಿಸಿದರು.

ಬಾಂಗ್ಲಾ ಅಕ್ರಮ ನುಸುಳುಕೋರರ ವಿರುದ್ಧ ದನಿ ಎತ್ತಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ, ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನ ವೈದ್ಯ ಟಿ. ನಾಗೇಂದ್ರಪ್ಪ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಯಾರನ್ನು ಓಲೈಸಲು ಈ ರೀತಿ ಮಾಡಿದ್ದಿರಾ? ಎಂದು ಪ್ರಶ್ನಿಸಿದರು. ಇದು ದೇಶದ್ರೋಹದ ಕೆಲಸವಾಗಿದೆ ಎಂದು ಟೀಕಿಸಿದರು.

ಅಲ್ಪಸಂಖ್ಯಾತರ ಓಲೈಕೆಗೆ ಇಷ್ಟು ಕೀಳು ಮಟ್ಟಕ್ಕೆ ಹೋಗುತ್ತೀರಾ. ರಾಜ್ಯ ಕಾಂಗ್ರೆಸ್ ಸರ್ಕಾರ ಹೋರಾಟಗಾರರನ್ನು ದಮನಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ಮುಖಂಡರಿಗೆ ಬೆದರಿಸುವುದು ಸರಿಯಲ್ಲ

ಸಿಇಟಿ ಪರೀಕ್ಷೆ - ಮುಲ್ಲಾ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಎಂ.ಎಲ್.ಸಿ. ಸಿ.ಟಿ. ರವಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ಗಮನಿಸಿ. ಪ್ರಿಯಾಂಕ್ ಖರ್ಗೆ ಅವರು ಈ ರಾಜ್ಯದ ಗೃಹಮಂತ್ರಿ, ತಾವು ಯಾವುದನ್ನು ಆದ್ಯತೆಯಾಗಿ ಪರಿಗಣಿಸಬೇಕು ಎನ್ನುವುದನ್ನು ಮರೆತಿದ್ದಾರೆ. ಬಿಜೆಪಿ ಮುಖಂಡರಿಗೆ ಬೆದರಿಸುವುದು ಸರಿಯಲ್ಲ ಎಂದು ತಿಳಿಸಿದರು.

ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ

ಬಾಂಗ್ಲಾ ಅಕ್ರಮ ನುಸುಳುಕೋರರನ್ನು ತಡೆಯುವ ಸಲುವಾಗಿ ದನಿ ಎತ್ತಿದರೆ ಅಂತಹ ವೈದ್ಯರನ್ನೇ ದಮನಿಸುವ ಕೆಲಸ ಮಾಡಿದ್ದಾರೆ. ವೈದ್ಯರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಸ್ಪಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸ್ಥಾನ ಕುಸಿತ..

ಸಿದ್ಧರಾಮಯ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿ, 2028 ರ ಚುನಾವಣೆಗೆ 80 ಸ್ಥಾನ ಗೆಲ್ಲುವ ಆಶಯ ಕಾಂಗ್ರೆಸ್ ಹೊಂದಿತ್ತು. ಸಿದ್ಧರಾಮಯ್ಯನವರ ಈ ತೀರ್ಮಾನದಿಂದ 50 ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.

Advertisement
AdSense · in-feed

Related