ಬಲಿಷ್ಠತೆ ಅಥವಾ ಭಾರ?: ಪುರುಷರ ಮನಸ್ಸಿನ ಅಡಗಿದ ನೋವು

2 मिनट में पढ़ें · अपडेट किया गया 45 व्यूज़
WhatsApp
ಬಲಿಷ್ಠತೆ ಅಥವಾ ಭಾರ?: ಪುರುಷರ ಮನಸ್ಸಿನ ಅಡಗಿದ ನೋವು

ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯವು ಅತ್ಯಂತ ಪ್ರಮುಖ ವಿಷಯವಾಗಿದೆ. ಆದರೆ ಈ ವಿಷಯದಲ್ಲಿ ಹೆಚ್ಚು ಗಮನ ಹರಿಸಲಾಗದ ವರ್ಗವೆಂದರೆ ಪುರುಷರು. “ಪುರುಷರು ಬಲಿಷ್ಠರು”, “ಅವರು ಸಮಸ್ಯೆಗಳನ್ನು ತಾವೇ ನಿಭಾಯಿಸಬೇಕು” ಎಂಬ ಸಮಾಜದ ನಿರೀಕ್ಷೆಗಳು, ಪುರುಷರನ್ನು ತಮ್ಮ ಭಾವನೆಗಳನ್ನು ಮರೆಮಾಡುವಂತೆ ಮಾಡುತ್ತವೆ. ಈ ಮೌನವೇ ನಿಧಾನವಾಗಿ ಮಾನಸಿಕ ಸಮಸ್ಯೆಗಳ ರೂಪದಲ್ಲಿ ಬೆಳೆಯುತ್ತದೆ.

  • ಭಾರತದಲ್ಲಿ 56 ಮಿಲಿಯನ್ ಪುರುಷರು ಅವಸಾದದಿಂದ ಬಳಲುತ್ತಿದ್ದಾರೆ.

  • 38 ಮಿಲಿಯನ್ ಪುರುಷರು ಆತಂಕ ಸಮಸ್ಯೆ ಎದುರಿಸುತ್ತಿದ್ದಾರೆ.

  • 83% ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಏಕೆಂದರೆ ಮನೋವೈದ್ಯರ ಕೊರತೆ ಗಂಭೀರವಾಗಿದೆ.

  • ಆತ್ಮಹತ್ಯೆ ಪ್ರಕರಣಗಳಲ್ಲಿ 67% ಪುರುಷರು, ವಿಶೇಷವಾಗಿ 18–45 ವಯಸ್ಸಿನವರು.

ಈ ಅಂಕಿ-ಅಂಶಗಳು ಕೇವಲ ಸಂಖ್ಯೆಗಳಲ್ಲ; ಅವು ಸಮಾಜದ ಮೌನದ ಕೂಗು.

ಪುರುಷರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಗಳು ವಿವಿಧ ರೀತಿಯಲ್ಲಿರುತ್ತವೆ:

- ಮನೋನೈರಾಶ್ಯ (Depression):

ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಖಾಲಿತನದ ಅನುಭವ, ನಿರಾಶೆ — ಇವು ಸಾಮಾನ್ಯ ಲಕ್ಷಣಗಳು. ಪುರುಷರು ಇದನ್ನು ಬಹಿರಂಗಪಡಿಸದೆ ಒಳಗೊಳಗೆ ಅನುಭವಿಸುತ್ತಾರೆ.

- ಆತಂಕ (Anxiety):

ಭವಿಷ್ಯದ ಬಗ್ಗೆ ಅತಿಯಾದ ಚಿಂತನೆ, ನಿರಂತರ ಒತ್ತಡ, ಭಯ — ಇವು ದಿನನಿತ್ಯದ ಜೀವನವನ್ನು ಅಸಮತೋಲನಗೊಳಿಸುತ್ತವೆ.

- ಕೋಪ ನಿಯಂತ್ರಣದ ಸಮಸ್ಯೆ:

ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಇಲ್ಲದಾಗ, ಅದು ಕೋಪದ ರೂಪದಲ್ಲಿ ಹೊರಹೊಮ್ಮುತ್ತದೆ.

- ಒಂಟಿತನ (Loneliness):

ಮನಸ್ಸಿನ ಮಾತು ಹೇಳಲು ಯಾರೂ ಇಲ್ಲದಿರುವುದು, ಭಾವನಾತ್ಮಕ ಬೆಂಬಲದ ಕೊರತೆ.

- ಅಡಿಕ್ಷನ್ (Addiction):

ಮದ್ಯಪಾನ, ಧೂಮಪಾನ ಅಥವಾ ಇತರ ಅಭ್ಯಾಸಗಳ ಮೂಲಕ ಒತ್ತಡದಿಂದ ತಪ್ಪಿಸಿಕೊಳ್ಳುವ ಪ್ರಯತ್ನ.

ಕಾರಣಗಳು:

"ಪುರುಷರು ಬಲಿಷ್ಠರಾಗಿರಬೇಕು" ಎಂಬ ಅಭಿಪ್ರಾಯವು ಭಾವನೆಗಳನ್ನು ತಡೆಯುವಂತೆ ಮಾಡುತ್ತದೆ.

ಆರ್ಥಿಕ ಒತ್ತಡ:

ಕುಟುಂಬದ ಮುಖ್ಯ ಆಧಾರವಾಗಿರುವ ಕಾರಣ ಹಣಕಾಸಿನ ಒತ್ತಡ ಹೆಚ್ಚಿರುತ್ತದೆ.

ಭಾವನೆಗಳ ಅಭಿವ್ಯಕ್ತಿ ಕೊರತೆ:

ದುಃಖ, ಭಯ, ಬೇಸರಗಳನ್ನು ಹಂಚಿಕೊಳ್ಳಲು ಅವಕಾಶವಿಲ್ಲದಿರುವುದು.

ಸಂಬಂಧಗಳ ಸಮಸ್ಯೆಗಳು:

ಪತ್ನಿ, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಅರ್ಥದೋಷಗಳು.

ಆರೋಗ್ಯದ ಕಡೆ ನಿರ್ಲಕ್ಷ್ಯ:

ಮಾನಸಿಕ ಆರೋಗ್ಯವನ್ನು ಪ್ರಾಮುಖ್ಯತೆ ನೀಡದಿರುವುದು.

ಈ ಮೌನದ ಪರಿಣಾಮಗಳು ದೀರ್ಘಕಾಲಿಕ ಮತ್ತು ಗಂಭೀರವಾಗಿವೆ. ಮನೋನೈರಾಶ್ಯ, ಆತಂಕ, ನಿದ್ರಾಹೀನತೆ, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಂವಹನದ ಕೊರತೆ ಮತ್ತು ಕೋಪದ ಪ್ರಭಾವದಿಂದ ಸಂಬಂಧಗಳು ದುರ್ಬಲಗೊಳ್ಳುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಕುಸಿಯುತ್ತದೆ. ಕೆಲವು ಸಂದರ್ಭಗಳಲ್ಲಿ, ಸಮಸ್ಯೆಗಳು ತೀವ್ರಗೊಂಡಾಗ ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳಿಗೂ ದಾರಿ ಮಾಡಿಕೊಡುತ್ತದೆ.

ಪರಿಹಾರಗಳು :

ಪರಿಹಾರ ಕ್ರಮಗಳು:

ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬಹುದು:

- ಭಾವನೆಗಳನ್ನು ಹಂಚಿಕೊಳ್ಳುವುದು: ಸ್ನೇಹಿತರು, ಕುಟುಂಬದವರು ಅಥವಾ ತಜ್ಞರೊಂದಿಗೆ ಮಾತನಾಡುವುದು

- ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ: ಕೌನ್ಸೆಲಿಂಗ್ ಮತ್ತು ಥೆರಪಿ ಪಡೆಯುವುದು,ಗ್ರಾಮೀಣ ಪ್ರದೇಶಗಳಲ್ಲಿ ಮನೋವೈದ್ಯರ ಸೇವೆ ವಿಸ್ತರಿಸಬೇಕು.

- ಆರೋಗ್ಯಕರ ಜೀವನಶೈಲಿ: ವ್ಯಾಯಾಮ, ಯೋಗ, ಧ್ಯಾನ

- ಸಮತೋಲನ ಜೀವನ: ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡುವುದು

- ಪುರುಷರ ಭಾವನೆಗಳನ್ನು ಸ್ವೀಕರಿಸುವ ಸಂಸ್ಕೃತಿ ಬೆಳೆಸಬೇಕು.

- ಕಂಪನಿಗಳು ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು.

-ಯೋಗ, ಧ್ಯಾನ, ವ್ಯಾಯಾಮ, ಹವ್ಯಾಸಗಳು.

-ಕುಟುಂಬ ಸದಸ್ಯರು ಪುರುಷರ ನೋವನ್ನು ಅರ್ಥಮಾಡಿಕೊಳ್ಳಬೇಕು.

ಪುರುಷರ ಮಾನಸಿಕ ಆರೋಗ್ಯವು ಕೇವಲ ವೈಯಕ್ತಿಕ ವಿಷಯವಲ್ಲ, ಅದು ಕುಟುಂಬ ಮತ್ತು ಸಮಾಜದ ಸ್ಥಿರತೆಯ ಮೂಲವಾಗಿದೆ. ಅವರ ಮನಸ್ಸಿನ ನೋವನ್ನು ಗುರುತಿಸಿ, ಸಹಾನುಭೂತಿಯೊಂದಿಗೆ ಸಹಾಯ ಮಾಡುವ ವಾತಾವರಣವನ್ನು ನಿರ್ಮಿಸುವುದು ಅಗತ್ಯ.ಪುರುಷರ ಮಾನಸಿಕ ಆರೋಗ್ಯವು ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಅದು ಸಮಾಜದ ಒಟ್ಟಾರೆ ಸುಸ್ಥಿತಿಗೆ ಸಂಬಂಧಿಸಿದೆ. “ಬಲಿಷ್ಠತೆ” ಎಂಬ ಪದದ ಅರ್ಥವನ್ನು ಪುನರ್‌ವ್ಯಾಖ್ಯಾನ ಮಾಡುವ ಸಮಯ ಬಂದಿದೆ. ಮೌನವನ್ನು ಮುರಿದು, ಸಂವಾದವನ್ನು ಪ್ರಾರಂಭಿಸಿದಾಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ನಿಜವಾದ ಬಲಿಷ್ಠತೆ ಕಣ್ಣೀರು ತಡೆಯುವುದಲ್ಲ — ಅದನ್ನು ಅರ್ಥಮಾಡಿಕೊಳ್ಳುವ ಧೈರ್ಯದಲ್ಲಿದ

-ಮನಸ್ವಿನಿ ಮೂರ್ತಿ

विज्ञापन
AdSense · in-feed

संबंधित लेख