ಇರಾನ್ ಮೇಲೆ ಕುವೈತ್‌, ಯುಎಇ, ಬಹರೈನ್ ದಾಳಿ

1 ನಿಮಿಷ ಓದು · ನವೀಕರಿಸಲಾಗಿದೆ 19 ವೀಕ್ಷಣೆ
WhatsApp

ಕುವೈತ್ ಮತ್ತು ಬಹರೈನ್ ರಾಷ್ಟ್ರಗಳು , ತಮ್ಮ ಮೇಲೆ ದಾಳಿ ನಡೆಸುತ್ತಿರುವ ಇರಾನ್ ವಿರುದ್ಧ ಗೌಪ್ಯವಾಗಿ ವೈಮಾನಿಕ ದಾಳಿ ನಡೆಸಿವೆ. ಇರಾನಿನ ಕ್ಷಿಪಣಿ ಹಾಗೂ ಡ್ರೋನ್‌ಗಳ ಸಂಗ್ರಹಾಗಾರಗಳು ಹಾಗೂ ಇನ್ನಿತರ ಸೇನಾ ನಿರ್ಮಾಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದ್ದು ಇದಕ್ಕೆ ಯುಎಇ ತನ್ನ ಗುಪ್ತಚರ ಮಾಹಿತಿಗಳನ್ನು ಹಾಗೂ ವಾಯುದಾಳಿಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿ ಸಹಾಯ ಮಾಡಿದೆ.

ಯುದ್ಧದ ಆರಂಭಿಕ ಹಂತದಲ್ಲಿ ಸೌದಿ ಅರೇಬಿಯಾ, ಇರಾನ್ ಮೇಲೆ ದಾಳಿ ನಡೆಸಿತ್ತು. ಆದರೀಗ, ಅದು ದಾಳಿಯಿಂದ ದೂರ ಉಳಿದಿದೆ. ಆದರೆ, ಮೊದಲಿನಿಂದ ಇರಾನ್ ತನ್ನ ಮೇಲೆ ದಾಳಿ ನಡೆಸಿದ್ದರೂ ಸುಮ್ಮನಿದ್ದ ಕುವೈತ್, ಬಹರೇನ್, ಯುಎಇ ಮಾತ್ರ ಈಗ ಸಿಡಿದೆದ್ದಿವೆ. ಇದು ಮಧ್ಯಪ್ರಾಚ್ಯದಲ್ಲಿ ಹೊಸತೊಂದು ಧ್ರುವೀಕರಣ ಆಗಬಹುದು.

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು