ಮನೆನಾ? ಕೆಲಸನಾ? ಮಹಿಳೆಯ ಮನಸ್ಸಿನ ದ್ವಂದ್ವ ಸ್ಥಿತಿ : ಸಮತೋಲನದ ಹುಡುಕಾಟ !!

2 ನಿಮಿಷ ಓದು · ನವೀಕರಿಸಲಾಗಿದೆ 45 ವೀಕ್ಷಣೆ
WhatsApp
ಮನೆನಾ? ಕೆಲಸನಾ? ಮಹಿಳೆಯ ಮನಸ್ಸಿನ ದ್ವಂದ್ವ ಸ್ಥಿತಿ : ಸಮತೋಲನದ ಹುಡುಕಾಟ !!

ಬೆಳಗಿನ ಸಮಯದಲ್ಲಿ ಸೀತಾ ತನ್ನ ಕೈಯಲ್ಲಿ ಎರಡು ಪತ್ರಗಳನ್ನು ಹಿಡಿದುಕೊಂಡು ಯೋಚಿಸುತ್ತಿದ್ದಳು. ಒಂದು ಅವಳ ಕನಸಿನ ಉದ್ಯೋಗದ ಅವಕಾಶ, ಮತ್ತೊಂದು ಮನೆಯ ತರಕಾರಿ ಮತ್ತು ಸಾಮಾನುಗಳ ಪಟ್ಟಿ . ಯಾವ ದಾರಿಯನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಅವಳ ಮನಸ್ಸನ್ನು ಕಾಡುತ್ತಿತ್ತು. ಇಂತಹ ಸ್ಥಿತಿ ಇಂದು ಅನೇಕ ಮಹಿಳೆಯರ ಜೀವನದಲ್ಲಿ ಕಾಣಿಸಿಕೊಳ್ಳುತ್ತದೆ. ಆಧುನಿಕ ಯುಗದಲ್ಲಿ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದರೂ, ಮನೆ ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸುವುದು ಇನ್ನೂ ಒಂದು ಸವಾಲಾಗಿದೆ. ಈ ಗೊಂದಲ ಮುಂದೆ ಮಾನಸಿಕ ಖಿನ್ನತೆ,ಹಾರ್ಮೋನುಗಳ ಅಸಮತೋಲಕ್ಕೆ ಹೆಚ್ಚು ಕಾರಣವಾಗುತ್ತಿದೆ.

1. ಅಪರಾಧ ಭಾವನೆ (Guilt):

ಮಹಿಳೆಯರು ಯಾವ ಆಯ್ಕೆಯನ್ನು ಮಾಡಿಕೊಂಡರೂ ಅಪರಾಧ ಭಾವನೆ ಕಾಡುತ್ತದೆ. ಕೆಲಸವನ್ನು ಆಯ್ಕೆ ಮಾಡಿಕೊಂಡರೆ ಕುಟುಂಬಕ್ಕೆ ಸಮಯ ಕೊಡಲಾಗುತ್ತಿಲ್ಲ ಎಂಬ ಭಾವನೆ; ಮನೆ ಆಯ್ಕೆ ಮಾಡಿಕೊಂಡರೆ ತಮ್ಮ ಕನಸುಗಳನ್ನು ಬಿಟ್ಟಿದ್ದೇವೆ ಎಂಬ ನೋವು.

2. ಮಾನಸಿಕ ಒತ್ತಡ ಮತ್ತು ಆತಂಕ:

ಕೆಲಸ ಮತ್ತು ಮನೆಯ ಜವಾಬ್ದಾರಿಗಳ ಒತ್ತಡ ಮಹಿಳೆಯರಲ್ಲಿ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಇದು ಕೆಲವೊಮ್ಮೆ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

3. ಆತ್ಮವಿಶ್ವಾಸದ ಕುಸಿತ:

“ನಾನು ಸರಿಯಾದ ನಿರ್ಧಾರ ತೆಗೆದುಕೊಂಡೇನಾ?” ಎಂಬ ಪ್ರಶ್ನೆ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ತಮ್ಮನ್ನು ಇತರರೊಂದಿಗೆ ಹೋಲಿಸುವ ಪ್ರವೃತ್ತಿಯೂ ಹೆಚ್ಚಾಗುತ್ತದೆ.

4. ಗುರುತಿನ ಗೊಂದಲ:

ಮಹಿಳೆಯರು ತಮ್ಮನ್ನು ಉದ್ಯೋಗಿಯೆ ಅಥವಾ ಗೃಹಿಣಿಯೆ ಎಂದು ಗುರುತಿಸಿಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಈ ದ್ವಂದ್ವ ಸ್ಥಿತಿ ಮನಸ್ಸಿನ ಅಶಾಂತಿಗೆ ಕಾರಣವಾಗುತ್ತದೆ.

5. ಭಾವನಾತ್ಮಕ ಅಸ್ಥಿರತೆ:

ಸಂತೋಷ, ದುಃಖ, ಕೋಪ, ನಿರಾಶೆ ಇತ್ಯಾದಿ ಭಾವನೆಗಳು ತಕ್ಷಣ ತಕ್ಷಣ ಬದಲಾಗುತ್ತವೆ. ಇದು ಕುಟುಂಬ ಸಂಬಂಧಗಳ ಮೇಲೆಯೂ ಪರಿಣಾಮ ಬೀರುತ್ತದೆ.

6. ಸಾಮಾಜಿಕ ಒತ್ತಡ:

ಸಮಾಜದಲ್ಲಿ ಮಹಿಳೆಯರ ಬಗ್ಗೆ ಇರುವ ಪರಂಪರೆಯ ನಿರೀಕ್ಷೆಗಳು ಅವರ ನಿರ್ಧಾರಗಳನ್ನು ಪ್ರಭಾವಿಸುತ್ತವೆ. “ಮನೆ ನೋಡಿಕೊಳ್ಳುವುದು ಮಹಿಳೆಯ ಕರ್ತವ್ಯ” ಎಂಬ ಧೋರಣೆ ಇನ್ನೂ ಪ್ರಭಾವಿ.

7. ಸಮಯ ನಿರ್ವಹಣೆಯ ಸಮಸ್ಯೆ:

ಕೆಲಸ ಮತ್ತು ಮನೆ ಎರಡನ್ನೂ ಸಮತೋಲನಗೊಳಿಸಲು ಸಮಯದ ಕೊರತೆ ಕಂಡುಬರುತ್ತದೆ. ಇದು ಮಹಿಳೆಯರಲ್ಲಿ ದೈಹಿಕ ಮತ್ತು ಮಾನಸಿಕ ಆಯಾಸವನ್ನುಂಟುಮಾಡುತ್ತದೆ.

ಪರಿಹಾರ ಕ್ರಮಗಳು:

ಮಹಿಳೆಯರು ಕೆಲಸ ಮತ್ತು ಮನೆಯ ನಡುವೆ ಸಮತೋಲನ ಸಾಧಿಸಲು ಹಲವು ಕ್ರಮಗಳನ್ನು ಅನುಸರಿಸಬಹುದು. ಈ ಕ್ರಮಗಳು ವ್ಯಕ್ತಿಗತ ಮಟ್ಟದಲ್ಲೂ ಹಾಗೂ ಕುಟುಂಬ ಮತ್ತು ಸಮಾಜದ ಮಟ್ಟದಲ್ಲೂ ಜಾರಿಯಾಗಬೇಕು.

1. ಕುಟುಂಬದ ಸಹಕಾರ:

ಮಹಿಳೆಯರ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಕುಟುಂಬದ ಸದಸ್ಯರ ಸಹಕಾರ ಅತ್ಯಂತ ಮುಖ್ಯ. ಗಂಡ, ಮಕ್ಕಳು ಹಾಗೂ ಇತರರು ಮನೆ ಕೆಲಸಗಳಲ್ಲಿ ಪಾಲ್ಗೊಂಡರೆ ಮಹಿಳೆಯರಿಗೆ ಸಮಯ ಮತ್ತು ಮನಶಾಂತಿ ದೊರೆಯುತ್ತದೆ. ಇದು ಸಮಾನತೆ ಮತ್ತು ಪರಸ್ಪರ ಗೌರವವನ್ನು ಬೆಳೆಸುತ್ತದೆ.

2. ಸಮಯ ನಿರ್ವಹಣೆ:

ಸಮಯವನ್ನು ಸರಿಯಾಗಿ ಯೋಜಿಸುವುದು ಅತ್ಯಂತ ಅಗತ್ಯ. ದಿನಚರಿಯನ್ನು ಸಿದ್ಧಪಡಿಸಿ ಪ್ರಮುಖ ಕೆಲಸಗಳಿಗೆ ಆದ್ಯತೆ ನೀಡಿದರೆ ಒತ್ತಡ ಕಡಿಮೆಯಾಗುತ್ತದೆ. “ಒಂದು ಸಮಯಕ್ಕೆ ಒಂದು ಕೆಲಸ” ಎಂಬ ವಿಧಾನ ಅನುಸರಿಸಿದರೆ ಕಾರ್ಯಕ್ಷಮತೆ ಹೆಚ್ಚುತ್ತದೆ.

3. ಕೆಲಸದ ಸ್ಥಳದಲ್ಲಿ ಸಹಕಾರ :

ಕೆಲಸದ ಸ್ಥಳದಲ್ಲಿ (workplace) ಸಹಕಾರ ಇರುವುದು ಮಹಿಳೆಯರಿಗೆ ಸಹಾಯಕ. ಉದಾಹರಣೆಗೆ, work-from-home, flexible timings, maternity leave ಇತ್ಯಾದಿ ಸೌಲಭ್ಯಗಳು ಮಹಿಳೆಯರ ಜೀವನವನ್ನು ಸುಲಭಗೊಳಿಸುತ್ತವೆ.

4. ಸ್ವಯಂ ಆರೈಕೆ (Self-care):

ಮಹಿಳೆಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸರಿಯಾದ ಆಹಾರ, ವ್ಯಾಯಾಮ, ಮತ್ತು ವಿಶ್ರಾಂತಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಸಹಾಯಕ. ತಮ್ಮನ್ನು ನೋಡಿಕೊಳ್ಳುವುದು ಸ್ವಾರ್ಥವಲ್ಲ, ಅಗತ್ಯ.

5. ಮನೋಭಾವದ ಬದಲಾವಣೆ:

ಸಮಾಜದಲ್ಲಿ “ಮನೆ ಕೆಲಸ ಮಹಿಳೆಯ ಕರ್ತವ್ಯ” ಎಂಬ ಹಳೆಯ ಮನೋಭಾವವನ್ನು ಬದಲಾಯಿಸುವುದು ಮುಖ್ಯ. ಮಹಿಳೆಯರ ಕನಸುಗಳಿಗೆ ಗೌರವ ನೀಡುವ ಮನೋಭಾವ ಬೆಳೆಸಬೇಕು.

6. ತಂತ್ರಜ್ಞಾನ ಉಪಯೋಗ:

ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸವನ್ನು ಸುಲಭಗೊಳಿಸಬಹುದು. Online services, ಮನೆ ಉಪಕರಣಗಳು (home appliances) ಇವು ಸಮಯ ಉಳಿಸಲು ಸಹಾಯ ಮಾಡುತ್ತವೆ.

7. ಮಾನಸಿಕ ಆರೋಗ್ಯದ ಕಾಳಜಿ:

ಅತಿಯಾದ ಒತ್ತಡದ ಸಂದರ್ಭಗಳಲ್ಲಿ ಮಹಿಳೆಯರು ಸ್ನೇಹಿತರು, ಕುಟುಂಬದವರು ಅಥವಾ ಸಲಹೆಗಾರರೊಂದಿಗೆ ಮಾತನಾಡುವುದು ಮುಖ್ಯ. ಅಗತ್ಯವಿದ್ದರೆ counseling ಪಡೆಯುವುದು ಉತ್ತಮ.

8. ಸ್ಪಷ್ಟ ಸಂವಹನ:

ಮಹಿಳೆಯರು ತಮ್ಮ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಕುಟುಂಬದವರೊಂದಿಗೆ ಸ್ಪಷ್ಟವಾಗಿ ಹಂಚಿಕೊಳ್ಳಬೇಕು. ಇದರಿಂದ ತಪ್ಪುಅರ್ಥಗಳು ಕಡಿಮೆಯಾಗುತ್ತವೆ ಮತ್ತು ಬೆಂಬಲ ಸಿಗುತ್ತದೆ.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ಮಹಿಳೆಯರು ಕೆಲಸ ಮತ್ತು ಮನೆಯ ನಡುವೆ ಸಮತೋಲನ ಸಾಧಿಸಬಹುದು. ಇದು ಅವರ ಮಾನಸಿಕ ಶಾಂತಿ, ಆತ್ಮವಿಶ್ವಾಸ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಮಹಿಳೆಯರು ಕೆಲಸ ಮತ್ತು ಮನೆಯ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭವು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಸಾಮಾಜಿಕ ಸಮಸ್ಯೆಯೂ ಆಗಿದೆ. ಆದ್ದರಿಂದ ಮಹಿಳೆಯರ ಆಯ್ಕೆಯನ್ನು ಗೌರವಿಸಿ, ಅವರಿಗೆ ಬೆಂಬಲ ನೀಡುವುದು ಸಮಾಜದ ಕರ್ತವ್ಯವಾಗಿದೆ. ಮಹಿಳೆಯರು ಸಂತೋಷವಾಗಿದ್ದರೆ ಮಾತ್ರ ಕುಟುಂಬ ಮತ್ತು ಸಮಾಜ ಅಭಿವೃದ್ಧಿಯಾಗುತ್ತದೆ.

  • ಅರ್ಪಿತ

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು